ಅಭಿಪ್ರಾಯ / ಸಲಹೆಗಳು

ರಾಜ್ಯ ಗುಣಮಟ್ಟ ಭರವಸೆ ಕೋಶ

ರಾಷ್ರ್ಟೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್), ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಪ್ರಧಾನ ಸಂಸ್ಥೆಯಾಗಿದೆ. ನ್ಯಾಕ್ ಸಂಸ್ಥೆಯು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಅಪೇಕ್ಷಿತ ಗುಣಮಟ್ಟ ಹಾಗು ಸಾಮರ್ಥ್ಯದೊಂದಿಗೆ ಜಾಗತಿಕ ಮಟ್ಟದಲ್ಲಿ ಪಾಲ್ಗೊಳ್ಳುವಂತೆ “ಶಕ್ತಗೊಳಿಸುವ ಸಂಸ್ಥೆ” ಎಂಬ ತತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಗಳ ನಿರಂತರ ಗುಣಮಟ್ಟವನ್ನು ವೃದ್ಧಿಸುವ ಚಟುವಟಿಕೆಗಳಲ್ಲಿ ಮೂರು ಹಂತದ ವ್ಯವಸ್ಥೆಯನ್ನು ಒಳಗೊಂಡಿದೆ.

 

1.       

ರಾಷ್ಟ್ರೀಯ ಮಟ್ಟ - ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ   ಪರಿಷತ್ತು   (ಎನ್‌ಎಎಸಿ)

2.       

ರಾಜ್ಯ ಮಟ್ಟ - ರಾಜ್ಯ ಗುಣಮಟ್ಟ ಭರವಸಾ ಕೋಶ (ಎಸ್‌ಕ್ಯೂಎಸಿ)

3.       

ಸಾಂಸ್ಥಿಕ ಮಟ್ಟ - ಆಂತರಿಕ ಗುಣಮಟ್ಟ ಭರವಸಾ ಕೋಶ (ಐಕ್ಯೂಎಸಿ)

 

 

 

 

 

ರಾಜ್ಯ ಗುಣಮಟ್ಟ ಭರವಸಾ ಕೋಶವು ಕರ್ನಾಟಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಗುಣಮಟ್ಟದ ಅರಿವು ಮೂಡಿಸಿ ಹಾಗು ಮೇಲ್ವಿಚಾರಣೆ ನಡೆಸುವ ಮೂಲಕ ನಿರೀಕ್ಷಿತ ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆಗೆ ಒಳಪಡುವಂತೆ ವಿವಿಧ ಹಂತಗಳಲ್ಲಿ ನಿರ್ವಹಿಸುತ್ತದೆ.

ರಾಜ್ಯ ಗುಣಮಟ್ಟ ಭರವಸಾ ಕೋಶ (ಎಸ್.ಕ್ಯೂ..ಸಿ) ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ (.ಕ್ಯೂ..ಸಿ)

ರಾಜ್ಯ ಗುಣಮಟ್ಟ ಭರವಸಾ ಕೋಶವು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಮೇಲ್ವಿಚಾರಣೆಗೆ ಒಳಪಟ್ಟಿರುತ್ತದೆ. ಕಾಲೇಜುಗಳಲ್ಲಿರುವ ಆಂತರಿಕ ಗುಣಮಟ್ಟ ಭರವಸಾ ಕೋಶದ ಮೂಲಕ ನಿರೀಕ್ಷಿತ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆಯುವಂತೆ ರಾಜ್ಯ ಗುಣಮಟ್ಟ ಭರವಸಾ ಕೋಶವು ಐ.ಕ್ಯೂ.ಎ.ಸಿ ಚಟುವಟಿಕೆಗೆ ಅವಶ್ಯಕವಿರುವ ಹಣಕಾಸನ್ನು ಒದಗಿಸುವುದು ಹಾಗು ನ್ಯಾಕ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಸಂಗ್ರಹಿಸುವಂತೆ ಹಾಗು ಮೇಲ್ವಿಚಾರಣೆ ಮೂಲಕ ಐ.ಕ್ಯೂ.ಎ.ಸಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಹಕರಿಸುವುದು.

 

ರಾಜ್ಯ ಗುಣಮಟ್ಟ ಭರವಸಾ ಕೋಶವು ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರುಗಳ ಜ್ಞಾನ ವೃದ್ಧಿಗೆ ಮತ್ತು ನವೀನ ಶೈಕ್ಷಣಿಕ ತಂತ್ರ ಹಾಗೂ ಉಪಕರಣಗಳನ್ನು ಬಳಸುವಂತೆ ಪ್ರೋತ್ಸಹಿಸುವುದಕ್ಕಾಗಿ ಸಮ್ಮೇಳನ/ಕಾರ್ಯಗಾರ/ವೆಬಿನಾರ್ ಗಳನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮಗಳನ್ನು ನ್ಯಾಕ್, ಐ.ಕ್ಯೂ.ಎ.ಸಿ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ಗುಣಮಟ್ಟವನ್ನು ಹೆಚ್ಚಿಸಿ ನ್ಯಾಕ್ ಅತ್ಯುತ್ತಮ ಶ್ರೇಣಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ಸಹಕರಿಸುವುದು.

ಎಸ್‌.ಕ್ಯೂ.ಎ.ಸಿ ನೋಡಲ್ ಅಧಿಕಾರಿಗಳ ವಿವರಗಳು

ಕ್ರಮ ಸಂಖ್ಯೆ.

ಹೆಸರು

ಹುದ್ದೆ

ಪ್ರದೇಶ

1

ಡಾ.ಕೆ. ವಿಕ್ರಮ್

ನೋಡಲ್ ಅಧಿಕಾರಿ

ಬೆಂಗಳೂರು

2

ಡಾ.ಅಶೋಕ್ ಕುಮಾರ್ ಎಂ

ಸಹಾಯಕ ನೋಡಲ್ ಅಧಿಕಾರಿ

ಶಿವಮೊಗ್ಗ

3

ಶ್ರೀ. ಅನಂತ್ ಕುಮಾರ್

ಸಹಾಯಕ ನೋಡಲ್ ಅಧಿಕಾರಿ

ಕಲ್ಬುರ್ಗಿ

4

ಶ್ರೀಮತಿ. ನೂತನ ಬಿ.ಡಿ.

ಸಹಾಯಕ ನೋಡಲ್ ಅಧಿಕಾರಿ

ಮೈಸೂರು

5

ಡಾ.ಅನಿತಾ ಸಿ. ವಿ

ಸಹಾಯಕ ನೋಡಲ್ ಅಧಿಕಾರಿ

ಧಾರವಾಡ

6

ಶ್ರೀ. ವಿನಯ್ ಕೆ.ವೈ

ಸಹಾಯಕ ನೋಡಲ್ ಅಧಿಕಾರಿ

ಮಂಗಳೂರು

 

 

 

ಜೂನ್ -2020 ರಂತೆ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾದೇಶಿಕವಾರು ನ್ಯಾಕ್ ಮಾನ್ಯತೆ ವಿವರ

Status/Region

Bengaluru

Dharwad

Kalburgi

Mangalore

Mysore

Shivamogga

Total

1.  Accredited

1(a) Accredited as on June 2020

36

40

27

16

35

30

184

1(b) Accredited status Lapsed as on June 2020

09

05

04

07

09

10

  44

Total

45

45

31

23

44

40

228

2. Not Accredited

2(a) Under Process

02

04

00

00

00

00

  06

2(b) Not Accredited (Colleges who have Completed Five year but not started A&A)

13

29

30

11

21

08

112

2(c) Colleges with shared Building with schools, PU College and other departments

13

16

11

03

09

06

  58

Total

28

49

41

14

30

14

176

3. Not Eligible

3 (a) Not eligible (not completed five years from establishment)

03

04

07

00

03

01

18

3 (b) Not Applicable (Cluster, Chitrakala, Zero Admission & Shifted)

05

01

00

00

01

01

08

Total

08

05

07

00

04

02

26

Total

81

99

79

37

78

56

430

 

 

ಪ್ರಾದೇಶಿಕವಾರು ನ್ಯಾಕ್ ಮಾನ್ಯತೆ ಪಡೆದ 184 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿವರ (ಜೂನ್ -2020 ರಂತೆ)

ಗ್ರೇಡ್ / ಪ್ರದೇಶ

ಬೆಂಗಳೂರು

ಧಾರವಾಡ

ಕಲ್ಬುರ್ಗಿ

ಮಂಗಳೂರು

ಮೈಸೂರು

ಶಿವಮೊಗ್ಗ

ಒಟ್ಟು

 A+

01

00

00

00

00

00

01

A

00

01

03

00

03

01

08

 B++

03

01

00

02

01

02

09

B+

03

05

03

03

01

04

19

          B

23

25

19

11

19

15

112

          C

06

08

02

00

11

08

35

ಒಟ್ಟು

36

40

27

16

35

30

184

ಜೂನ್ 2020 ರಂತೆ ಒಟ್ಟು 184 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಒಳಪಟ್ಟಿದ್ದು, 06 ಕಾಲೇಜುಗಳು ನ್ಯಾಕ್  ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆಯಲ್ಲಿವೆ. 2020-21 ರ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಗುಣಮಟ್ಟ ಭರವಸಾ ಕೋಶವು ಕನಿಷ್ಟ 100 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆಗೆ ಒಳಪಡಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಗುಣಮಟ್ಟ ಭರವಸಾ ಕೋಶದ ವತಿಯಿಂದ ಕಾಲೇಜುಗಳ ಅಗತ್ಯತೆಗೆ ಅನುಗುಣವಾಗಿ ವಿವಿಧ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 20-03-2021 12:40 PM ಅನುಮೋದಕರು: DCEಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080