ಇಲಾಖೆಯ ಸಾಧನೆಗಳು

 • ಉನ್ನತ ಶಿಕ್ಷಣದಲ್ಲಿ ವಿಧ್ಯಾರ್ಥಿನಿಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿನಿಯರಿಗೆ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣ ಶುಲ್ಕ ವಿನಾಯಿತಿ ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಶುಲ್ಕ ಹಾಗೂ ಪ್ರಯೋಗಾಲಯ ಶುಲ್ಕ ವಿನಾಯಿತಿ ನೀಡಲಾಗಿದೆ.
 • ಕಳೆದ ಐದು ವರ್ಷಗಳಲ್ಲಿ 77 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆ ಕಲ್ಪಿಸಲಾಗಿದೆ.
 • ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಹಾಸ್ಟೆಲ್ಗಳೊಂದಿಗೆ 11 ಮಾದರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು 06 ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕಾಗಿ ರೂ. 254.35 ಕೋಟಿ ಬಿಡುಗಡೆ ಮಾಡಲಾಗಿದೆ.
 • ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಪ್ರಾರಂಭಿಸಲಾಗಿದೆ.
 • ಬಾಗಲಕೋಟೆ ಜಿಲ್ಲೆಯ ಮುಧೋಳ ತಾ|| ಯಡಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಪ್ರಾರಂಭಿಸಲಾಗಿದೆ.
 • ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಾನೂನು ಕಾಲೇಜನ್ನು ಮಂಜೂರು ಮಾಡಲಾಗಿದೆ.
 • 26 ಹೊಸ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳೂ ಸೇರಿದಂತೆ ಅವಶ್ಯಕತೆ ಆಧರಿಸಿ ಒಟ್ಟು 52 ಹೊಸ ಪ್ರಥಮ ದರ್ಜೆ ಕಾಲೇಜುಗಳನ್ನು ಕಳೆದ ಐದು ವರ್ಷಗಳಲ್ಲಿ ಪ್ರಾರಂಭಿಸಲಾಗಿರುತ್ತದೆ.
 • ಮೈಸೂರಿನ ಪಡುವಾರಹಳ್ಳಿಯಲ್ಲಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು ವಿಧ್ಯಾರ್ಥಿನಿಲಯದೊಡನೆ ಪ್ರಾರಂಭಿಸಲು ರೂ.81.56 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
 • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಎದುರಾಗಿ 1942 ಸಹಾಯಕ ಪ್ರಾಧ್ಯಾಪಕರನ್ನು ಕೆ.ಇ.ಎ. ವತಿಯಿಂದ ನಡೆದ ಪ್ರವೇಶ ಪರೀಕ್ಷೆ ಮತ್ತು ಕೌನ್ಸಿಲಿಂಗ್ ಮೂಲಕ ನೇಮಕಾತಿ ಮಾಡಲಾಗಿದೆ. ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕರ ಹುದ್ದೆಗಳಿಗೆ ಎದುರಾಗಿ 749 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಮಂಜೂರು ಮಾಡಲಾಗಿದೆ.
 • ರೂಸಾ1 ಯೋಜನೆಯಡಿಯಲ್ಲಿ 89 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮೂಲ ಸೌಕರ್ಯಗಳ ಉನ್ನತೀಕರಣ, ಮಂಡ್ಯ ಕಾಲೇಜನ್ನು ಏಕೀಕೃತ ವಿಶ್ವವಿದ್ಯಾಲಯವಾಗಿ ಉನ್ನತೀಕರಣ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಇತರೆ 2 ಕಾಲೇಜುಗಳನ್ನು ಸೇರಿಸಿ ಏಕಿಕೃತ (ಕ್ಲಸ್ಟರ್) ಮಹಾವಿಶ್ವವಿದ್ಯಾಲಯವಾಗಿ ಉನ್ನತೀಕರಣ, ಜೇವರ್ಗಿ ಪ್ರಥಮ ದರ್ಜೆ ಕಾಲೇಜಿನ ಉನ್ನತೀಕರಣ ಹಾಗೂ 9 ವಿಶ್ವವಿದ್ಯಾಲಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು ರೂ. 500 ಕೋಟಿಗಳಲ್ಲಿ ಕೈಗೊಳ್ಳಲಾಗುತ್ತಿದೆ. ರೂಸಾ-2.0 ಯೋಜನೆಯಡಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾದರಿ ವಸತಿಯುಕ್ತ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ.
 • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಈಘ್ರವಾಗಿ ಪರಿಹಾರ ದೊರಕಿಸಿಕೊಡಲು ‘ಮೈತ್ರಿ’ ಎಂಬ ವಿದ್ಯಾರ್ಥಿ ಸಹಾಯವಾಣಿಯನ್ನು ಪ್ರಾರಂಭಿಲಾಗಿದೆ. ಈ ಸಹಾಯವಾಣಿಯ ದೂರವಾಣಿ ಸಂಖ್ಯೆ: 1800 425 6178 ಮತ್ತು ವಾಟ್ಸಾಪ್ ಸಂಖ್ಯೆ: 80955 56178. ಕಾಲೇಜಿನ ಮೂಲಸೌಕರ್ಯಗಳ ಮತ್ತು ಸಿಬ್ಬಂದಿಯನ್ನು ಕುರಿತ, ವೈಯಕ್ತಿಕ ಹಾಗೂ ಮಾನಸಿಕ ತೊಂದರೆಗಳನ್ನು ಕುರಿತ, ಬೋಧನೆಗೆ, ಉದ್ಯೋಗ ಮತ್ತು ಉನ್ನತ ವ್ಯಾಸಂಗಕ್ಕೆ, ಮೌಲ್ಯಮಾಪನಕ್ಕೆ, ವಿದ್ಯಾರ್ಥಿವೇತನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಮೈತ್ರಿ ಸಹಾಯವಾಣಿಗೆ ತಿಳಿಸಬಹುದು.
 • ಸ್ಫರ್ಧಾತ್ಮಕ ಪರೀಕ್ಷೆಗಳು, ವೃತ್ತಿ, ಕೌಶಲ್ಯಾಭಿವೃದ್ಧಿ, ಉನ್ನತ ವ್ಯಾಸಂಗ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು, ಸ್ವಯಂ ಉದ್ಯೋಗಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಇವೇ ಮೊದಲಾದ ಉಪಯುಕ್ತ ವಿಷಯಗಳ ಕುರಿತು ಮಾರ್ಗದರ್ಶನ ನೀಡಲು ಹಾಗೂ ಅಭಿಪ್ರೇರಣಾ ಭಾಷಣಗಳು, ಆಪ್ತಸಲಹೆಯನ್ನು ಒಳಗೊಂಡಿರುವ ಕಾರ್ಯಕ್ರಮಗಳನ್ನು ನೀಡಲು ಇಲಾಖೆ “ವಿಜಯೀಭವ’’ ಎಂಬ ಯೂ-ಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿದೆ.
 • ಯುವಜನರಿಗಾಗಿ ವಿವಿಧ ಸರ್ಕಾರಿ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು, ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳು, ಉದ್ಯೋಗಾವಕಾಶಗಳು ಮತ್ತು ಉನ್ನತ ವ್ಯಾಸಂಗ, ವಿದ್ಯಾರ್ಥಿವೇತನಗಳ ಕುರಿತ ಮಾಹಿತಿಯನ್ನು ಯುವಜನತೆಗೆ ತಲುಪಿಸಲು ರಾಜ್ಯದ 30 ಜಿಲ್ಲಾಕೇಂದ್ರಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಯುವಸಬಲೀಕರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಪ್ರಯೋಜನವನ್ನು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಮಾತ್ರವಲ್ಲದೆ, ಎಲ್ಲ ಆಸಕ್ತ ಯುವಜನರೂ ಪಡೆದುಕೊಳ್ಳಬಹುದಾಗಿದೆ.
 • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ವಿವಿಧ ವಿಷಯಗಳಲ್ಲಿ ನುರಿತ ಅಧ್ಯಾಪಕರಿಂದ ಇ-ಕಂಟೆಂಟ್ ಅನ್ನು ಅಭಿವೃದ್ಧಿಪಡಿಸಿ, ರೆಕಾರ್ಡ್ ಮಾಡಿ “ಜ್ಞಾನ ನಿಧಿ’’ ಎಂಬ ಯೂ-ಟ್ಯೂಬ್ ಚಾನಲ್ ಗೆ ಅಪ್ ಲೋಡ್ ಮಾಡಲಾಗುತ್ತಿದೆ.

ಇತ್ತೀಚಿನ ನವೀಕರಣ​ : 31-03-2020 10:48 PM ಅನುಮೋದಕರು: DCE