ಮಾಹಿತಿ ಹಕ್ಕು

 

 RTI

ಮಾಹಿತಿ ಹಕ್ಕು ಮಾಹಿತಿಗಾಗಿ

 

ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಆಯುಕ್ತರ ಕಛೇರಿಯಲ್ಲಿ ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕರು, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಗಳಲ್ಲಿ ಆಯಾ ಕಛೇರಿಯ ಜಂಟಿ ನಿರ್ದೇಶಕರುಗಳು ಹಾಗೂ ಕಾಲೇಜುಗಳಲ್ಲಿ ಪ್ರಾಂಶುಪಾಲರುಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುತ್ತಾರೆ.ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಸ್ವೀಕೃತಿಗೊಂಡ ಅರ್ಜಿಗಳಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಹಾಗೂ ಮಾಹಿತಿ ಹಕ್ಕು ಅಧಿನಿಯಮ 2005 ಕ್ಕೆ ಸಂಬಂಧಿಸಿದ ಅರ್ಜಿಗಳ ಸ್ವೀಕೃತಿ ಬಗ್ಗೆ ಎಲ್ಲಾ ಕಾಲೇಜುಗಳ ಕ್ರೋಢೀಕೃತ ಮಾಹಿತಿಯನ್ನು ಪ್ರಾದೇಶಿಕ ಜಂಟಿ ನಿರ್ದೇಶಕರುಗಳ ಕಛೇರಿಯಿಂದ ಪಡೆಯಲಾಗುತ್ತದೆ. ಹಾಗೂ ಕೇಂದ್ರ ಕಛೇರಿಯ ಎಲ್ಲಾ ವಿಭಾಗಗಳಲ್ಲಿನ ಅರ್ಜಿ ಸ್ವೀಕೃತಿ ಬಗ್ಗೆ ಮಾಹಿತಿ ಪಡೆದು ಕ್ರೋಢೀಕೃತ ಮಾಹಿತಿಯನ್ನು ಸಿದ್ಧಪಡಿಸಿ, ಇಲಾಖೆಯ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ಹಕ್ಕು ಕೈಪಿಡಿಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಮಾಡಲಾಗುತ್ತದೆ.

 

ಪ್ರಸಕ್ತ 2018-19 ನೇ ಸಾಲಿನಲ್ಲಿ ಈ ಇಲಾಖೆಯ ಎಲ್ಲಾ ವಿಭಾಗಗಳು ಹಾಗೂ ಇಲಾಖಾ ವ್ಯಾಪ್ತಿಯ ಕಛೇರಿ/ಕಾಲೇಜುಗಳಲ್ಲಿ ಒಟ್ಟು ಅರ್ಜಿಗಳು 2,694 ಸ್ವೀಕೃತವಾಗಿದ್ದು, ಸದರಿ 2,694 ಅರ್ಜಿಗಳಿಗೂ ಮಾಹಿತಿ ನೀಡಲಾಗಿದೆ.

 

ಸಾರ್ವಜನಿಕ ಮಾಹಿತಿ ಅಧಿಕಾರಿಗಳು/ಮೊದಲನೇ ಮೇಲ್ಮನವಿ ಪ್ರಾಧಿಕಾರ ಅಧಿಕಾರಿಗಳ ಪಟ್ಟಿ

  • ಕೇಂದ್ರ ಕಛೇರಿ - ಸಾರ್ವಜನಿಕ ಮಾಹಿತಿ ಅಧಿಕಾರಿಗಳು
  • ಬೆಂಗಳೂರು ವಲಯ - ಪ್ರಾದೇಶಿಕ ಜಂಟಿ ನಿರ್ದೇಶಕರು
  • ಮೈಸೂರು ವಲಯ-    ಪ್ರಾದೇಶಿಕ ಜಂಟಿ ನಿರ್ದೇಶಕರು
  • ಶಿವಮೊಗ್ಗ ವಲಯ -    ಪ್ರಾದೇಶಿಕ ಜಂಟಿ ನಿರ್ದೇಶಕರು
  • ಮಂಗಳೂರು ವಲಯ - ಪ್ರಾದೇಶಿಕ ಜಂಟಿ ನಿರ್ದೇಶಕರು
  • ಧಾರವಾಡ ವಲಯ -   ಪ್ರಾದೇಶಿಕ ಜಂಟಿ ನಿರ್ದೇಶಕರು
  • ಕಲಬುರಗಿ ವಲಯ -    ಪ್ರಾದೇಶಿಕ ಜಂಟಿ ನಿರ್ದೇಶಕರು

ಇತ್ತೀಚಿನ ನವೀಕರಣ​ : 04-03-2020 12:33 PM ಅನುಮೋದಕರು: DCE