ಅಭಿಪ್ರಾಯ / ಸಲಹೆಗಳು

ಯುವ ಸಬಲೀಕರಣ ಕೇಂದ್ರ

 ಯುವ ಸಬಲೀಕರಣ ಕೇಂದ್ರ

ರಾಜ್ಯದ ಯುವಜನತೆಗೆ ಮಾಹಿತಿ, ತರಬೇತಿ ಮತ್ತು ಪ್ರೇರಣೆಗಳನ್ನು ನೀಡುವ ಮೂಲಕ ಅವರ ಆಯ್ಕೆಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹಾಗೂ ಉನ್ನತ ಶಿಕ್ಷಣಾವಕಾಶಗಳ ಕುರಿತು ಅರಿವು ಮೂಡಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ತಲಾ ಒಂದರಂತೆ ಯುವ ಸಬಲೀಕರಣ ಕೇಂದ್ರವನ್ನು ಆಯಾ ಜಿಲ್ಲೆಯ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತಿದೆ.  ಆಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು ಮಾತ್ರವಲ್ಲದೆ ಸುತ್ತಮುತ್ತಲಿನ ಯುವಜನತೆಯೂ ಕೂಡ ಈ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬಹುದು.


ಸಾಮಾನ್ಯವಾಗಿ ಯುವಜನತೆ ನಾಲ್ಕು ಹಂತಗಳಲ್ಲಿ ಕವಲುದಾರಿಗಳ ಅಂಚಿನಲ್ಲಿ ನಿಂತು ಮಾರ್ಗದರ್ಶನವನ್ನು ಅಪೇಕ್ಷಿಸುತ್ತದೆ.


•     10ನೇ ತರಗತಿ ಪೂರ್ಣಗೊಳಿಸಿದ ನಂತರ
•     ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ
•     ಪದವಿ ವ್ಯಾಸಂಗವನ್ನು ಪೂರೈಸಿದ ನಂತರ
•     ಸ್ನಾತಕೋತ್ತರ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ನಂತರ.

 

ಈ ಪ್ರತಿಯೊಂದು ಸ್ತರದಲ್ಲೂ ಯುವಜನತೆ ಆರಿಸಿಕೊಳ್ಳಬಹುದಾದ ಉನ್ನತ ಶಿಕ್ಷಣಾವಕಾಶಗಳು ಮತ್ತು ಉದ್ಯೋಗಾವಕಾಶಗಳು, ಅವುಗಳು ಅಪೇಕ್ಷಿಸುವ ಅರ್ಹತೆ, ಅವುಗಳಿಗೆ ಮಾಡಿಕೊಳ್ಳಬೇಕಾದ ಸಿದ್ಧತೆ, ಆ ವಿದ್ಯಾಭ್ಯಾಸ ಲಭ್ಯವಿರುವ ಶಿಕ್ಷಣ ಸಂಸ್ಥೆಗಳು ಅಥವಾ ಆ ಬಗೆಯ ಉದ್ಯೋಗಾವಕಾಶಗಳಿರುವ ಇಲಾಖೆಗಳು/ಕಂಪೆನಿಗಳನ್ನು ಕುರಿತ ವಿವರಪೂರ್ಣ ಮಾಹಿತಿಯನ್ನು ಅವರ ಅಗತ್ಯಾನುಸಾರ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಯುವಜನಾಂಗಕ್ಕಾಗಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸುವುದು ಯುವ ಸಬಲೀಕರಣ ಕೇಂದ್ರಗಳ ಧ್ಯೇಯವಾಗಿರುತ್ತದೆ. ಉದಾಹರಣೆಗೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY), ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDUGVY), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (NRLM), ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆ (CMKKY), ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜಾರಿಗೊಳ್ಳುತ್ತಿರುವ ಸ್ವ-ಉದ್ಯೋಗ ಯೋಜನೆ ಹಾಗೂ ಭೂ ಖರೀದಿ ಯೋಜನೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಾದ ವಿದ್ಯಾರ್ಥಿ ಕ್ಷೇಮ ಯೋಜನೆ, ಪ್ರೌಢಶಾಲಾ ವಿದ್ಯಾರ್ಥಿಗಳೀಗಾಗಿ ನೀಡಲಾಗುವ ಪ್ರೋತ್ಸಾಹಕಗಳು, ಸಾಹಸಕ್ರೀಡಾ ಶಿಬಿರಗಳು, ಯುವಜನೋತ್ಸವಗಳು ಇವೇ ಮೊದಲಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.  ‘ವಿಶ್ವ ಕೌಶಲ್ಯ ಸ್ಫರ್ಧೆ-2021’ಕ್ಕಾಗಿ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ನಡೆಸುತ್ತಿರುವ ಪೂರ್ವಸಿದ್ಧತಾ ಕಾರ್ಯಕ್ರಮಗಳ ಕುರಿತಾಗಿಯೂ ಯುವಸಬಲೀಕರಣ ಕೇಂದ್ರಗಳು ಮಾಹಿತಿ ನೀಡಲಿವೆ.


ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಂತಹ ಸರ್ಕಾರಿ ಇಲಾಖೆಗಳು ನೀಡುವ ವಿವಿಧ ವಿದ್ಯಾರ್ಥಿವೇತನಗಳ, ನಡೆಸುವ ವಿದ್ಯಾರ್ಥಿನಿಲಯಗಳ, ಆಯೋಜಿಸುವ ತರಬೇತಿ ಕಾರ್ಯಕ್ರಮಗಳ ವಿವರ ಯುವಸಬಲೀಕರಣ ಕೇಂದ್ರದಲ್ಲಿ ಲಭ್ಯವಿರುತ್ತದೆ. ಸರ್ಕಾರೇತರ ಸಂಸ್ಥೆಗಳು ಆಯೋಜಿಸುವ ಯುವಪರ ಕಾರ್ಯಕ್ರಮಗಳು, ಉದ್ಯೋಗಮೇಳಗಳು, ಶಿಷ್ಯವೇತನಗಳು ಮತ್ತಿತರ ಕಾರ್ಯಕ್ರಮಗಳ ಮಾಹಿತಿಯೂ ಈ ಕೇಂದ್ರಗಳಲ್ಲಿ ದೊರೆಯುತ್ತದೆ.


ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿರುವ ಕಾಲೇಜುಗಳು ಹಾಗೂ ಕೋರ್ಸ್‍ಗಳ ವಿವರಗಳನ್ನು ನೀಡುವುದರ ಜೊತೆಗೆ ವಿವಿಧ MOOCs ಕೋರ್ಸ್‍ಗಳನ್ನು ನೀಡುವ ಆನ್‍ಲೈನ್ ವೇದಿಕೆಗಳು, ಆನ್-ಲೈನ್ ಉದ್ಯೋಗದ ಪೋರ್ಟಲ್ ಗಳನ್ನು ಕುರಿತ ಮಾಹಿತಿ, ಮೃದುಕೌಶಲ್ಯ, ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮತ್ತು ವ್ಯಕ್ತಿತ್ವನಿರ್ಮಾಣ ಇವುಗಳಿಗೆ ಸಂಬಂಧಪಟ್ಟ ಅಲ್ಪಾವಧಿ ಕಾರ್ಯಾಗಾರಗಳನ್ನೂ ಯುವಸಬಲೀಕರಣ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.


ಉದ್ಯೋಗ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಇಬ್ಬರು ಅಧ್ಯಾಪಕರನ್ನು ಈ ಕೇಂದ್ರದ ತಜ್ಞ ಮಾರ್ಗದರ್ಶಕರನ್ನಾಗಿ ಗುರುತಿಸಿ ಕಾರ್ಯ ನಿರ್ವಹಿಸಲಾಗುತ್ತದೆ. ಈ ಕೇಂದ್ರದಲ್ಲಿ ಉದ್ಯೋಗಸಿದ್ಧತೆಯ, ವ್ಯಕ್ತಿತ್ವ ನಿರ್ಮಾಣ ಮತ್ತು ಯಶಸ್ಸುಗಳಿಗೆ ಸಂಬಂಧಪಟ್ಟ ಸ್ವಸಹಾಯ ಪುಸ್ತಕಗಳನ್ನು ಪರಾಮರ್ಶೆಗಾಗಿ ನೀಡಲಾಗುತ್ತದೆ. ಹೀಗೆ ಯುವಸಬಲೀಕರಣ ಕೇಂದ್ರಗಳು ಉನ್ನತ ವ್ಯಾಸಂಗ ಹಾಗೂ ಉದ್ಯೋಗಾವಕಾಶದ ಕುರಿತು ಮಾರ್ಗದರ್ಶನವನ್ನು ಅಪೇಕ್ಷಿಸುವ ಯುವಜನತೆಗೆ ಏಕೈಕ ಪರಿಹಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಇತ್ತೀಚಿನ ನವೀಕರಣ​ : 31-03-2020 11:44 AM ಅನುಮೋದಕರು: DCEಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080