ಅಭಿಪ್ರಾಯ / ಸಲಹೆಗಳು

ವಿದ್ಯಾರ್ಥಿವೇತನಗಳು

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕೆಳಕಂಡ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ.

 

1.ಪದವಿ ಮಟ್ಟದಲ್ಲಿ ವಿಜ್ಞಾನ ಓದುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ವಿದ್ಯಾರ್ಥಿವೇತನ   (ಸರ್.ಸಿ.ವಿ.ರಾಮನ್)

ಸರ್.ಸಿ.ವಿ.ರಾಮನ್ ವಿದ್ಯಾರ್ಥಿವೇತನದಡಿ ಪ್ರತಿ ವಿದ್ಯಾರ್ಥಿಗೆ ರೂ.5000/- ಗಳಂತೆ ಸಾಮಾನ್ಯ ವರ್ಗದ ವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

 

2.ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ.

ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನದಡಿ ಬಿ.ಎ, ಬಿ.ಕಾಂ, ಬಿ.ಎಸ್ಸಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಪ್ರತಿ ವಿದ್ಯಾರ್ಥಿಗೆ ರೂ.2000/- ಗಳಂತೆ ವಿದ್ಯಾರ್ಥಿನಿಯರುಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

 

3.ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ

ಬಿ.ಪಿ.ಎಲ್ ಕಾರ್ಡು ಹೊಂದಿದ್ದು, ವೃತ್ತಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ (ಪ್ರತಿ ಜಿಲ್ಲೆಯ 10 ವಿದ್ಯಾರ್ಥಿನಿಯರಿಗೆ ಸಿ.ಇ.ಟಿ ಘಟಕದಲ್ಲಿ ಅವರುಗಳು ಪಾವತಿಸಿರುವ ಶುಲ್ಕ ಮರುಪಾವತಿ ಮಾಡಲಾಗುವುದು. (ನೂತನ & ನವೀಕರಣ).

 

4.ರಾಜೀವ್ ಗಾಂಧಿ ಸಾಲರೂಪದ ವಿದ್ಯಾರ್ಥಿವೇತನ

ವಾಷಿರ್ಕಕ 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಬ್ಯಾಂಕಿನವರು ನೀಡಿದ ಸಾಲಕ್ಕೆ ವ್ಯಾಸಂಗದ ಅವಧಿಯ ಬಡ್ಡಿ ಸಬ್ಸಿಡಿಯನ್ನು ಸರ್ಕಾರದಿಂದ ಪಾವತಿಸಲಾಗುತ್ತಿದೆ.

 

5.ಹೆಚ್.ಐ.ವಿ/ಕುಷ್ಠರೋಗ ಪೀಡಿತರಿಗೆ/ಪೀಡಿತರ ಮಕ್ಕಳಿಗೆ ವಿದ್ಯಾರ್ಥಿವೇತನ

ಹೆಚ್.ಐ.ವಿ./ಏಡ್ಸ್ ಅಥವಾ ಕುಷ್ಟರೋಗಕ್ಕೆ ತುತ್ತಾದ ವಿದ್ಯಾರ್ಥಿಗಳ ಅಥವಾ ಮೇಲ್ಕಂಡ ರೋಗ ಪೀಡಿತರಿಗೆ (ಬದುಕಿರುವ/ಮೃತ ಹೊಂದಿರುವ ಪೋಷಕರಿಗೆ) ಜನಿಸಿದ ವಿದ್ಯಾರ್ಥಿಗಳಿಗೆ ಯೋಜನೆಯಡಿ ರೂ.21,800/-ಗಳ ವಿದ್ಯಾರ್ಥಿವೇತನವನ್ನು  ನೀಡಲಾಗುತ್ತಿದೆ.

 

6.ಪದವಿ ಮಟ್ಟದಲ್ಲಿ ಕನ್ನಡ/ಸಂಸ್ಕøತ/ಆಂಗ್ಲಭಾಷಾ ವಿದ್ಯಾರ್ಥಿವೇತನ

ಪದವಿ ಮಟ್ಟದಲ್ಲಿ ಕನ್ನಡ/ಸಂಸ್ಕøತ/ಆಂಗ್ಲಭಾಷೆಯನ್ನು ಪ್ರಧಾನವಿಷಯವನ್ನಾಗಿ ತೆಗೆದುಕೊಂಡು ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ.500/-ಗಳ  ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

 

7.ಎಸ್.ಸಿ/ಎಸ್.ಟಿ ಹಾಗೂ ಸೈನಿಕ ಸಿಬ್ಬಂದಿ ಮಕ್ಕಳ ವಿದ್ಯಾರ್ಥಿವೇತನ

ಎಸ್.ಸಿ/ಎಸ್.ಟಿ ಹಾಗೂ ಸೈನಿಕ ಸಿಬ್ಬಂದಿ ಮಕ್ಕಳಿಗೆ ವಿದ್ಯಾರ್ಥಿವೇತನ  ನೀಡಲಾಗುತ್ತಿದೆ.

 

 8.ಆಂಗ್ಲೋ- ಇಂಡಿಯನ್ ವಿದ್ಯಾರ್ಥಿವೇತನ

ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಂಗ್ಲೋ ಇಂಡಿಯನ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

                             

                                                                                                        

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

ಇತ್ತೀಚಿನ ನವೀಕರಣ​ : 31-03-2020 12:21 PM ಅನುಮೋದಕರು: DCE



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080