ಅಭಿಪ್ರಾಯ / ಸಲಹೆಗಳು

ಉದ್ಯೋಗ ಮಾಹಿತಿ ಕೋಶ

ಇಂದಿನ ಜಾಗತಿಕ ಪರಿಸರದಲ್ಲಿ ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ವ್ಯಾಸಂಗ  ಮಾಡುತ್ತಿರುವ  ವಿದ್ಯಾರ್ಥಿಗಳು,  ಪದವೀಧರರಾದೊಡನೆ ವಿಶ್ವದಾದ್ಯಂತ ಲಭ್ಯವಿರುವ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಮರ್ಥರಾಗಬೇಕು.ಈ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ 2014-15ನೇ ಸಾಲಿನಲ್ಲಿ ಎಲ್ಲ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಕೋಶಗಳನ್ನು ಸ್ಥಾಪಿಸಿತು.

 

ಉದ್ಯೋಗಕೋಶಗಳನ್ನು ಪ್ರಾರಂಭಿಸುವುದರ ಜೊತೆಗೆ ಇಲಾಖೆ ಉದ್ಯೋಗ ಕೋಶ ಸಮಿತಿಗಳರಚನೆಯ ಕುರಿತು ಮಾರ್ಗಸೂಚಿಗಳನ್ನು,  ವರ್ಷದಾದ್ಯಂತ ಇವುಗಳ  ಮೂಲಕ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ವಿವರವನ್ನು ಮತ್ತು ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಹಾಗೂ ಉದ್ಯೋಗ ಮೇಳಗಳ ಕುರಿತ ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಇದರೊಂದಿಗೆ ಉದ್ಯೋಗಕೋಶಗಳ  ಉಪಕ್ರಮಗಳ ಪ್ರಗತಿ ಪರಿಶೀಲನೆಯನ್ನೂ  ಮಾಡಲಾಗುತ್ತಿದೆ. ಸ.ಪ್ರ.ದ.ಕಾಲೇಜುಗಳಲ್ಲಿ  ಉದ್ಯೋಗಕೋಶಗಳು  ಹಮ್ಮಿಕೊಳ್ಳುವ  ಕಾರ್ಯಕ್ರಮಗಳ  ಪ್ರಾಮುಖ್ಯತೆ,  ಉನ್ನತ ಶಿಕ್ಷಣ  ಮತ್ತು ನ್ಯಾಕ್ ಮಾನ್ಯತಾ ಪ್ರಕ್ರಿಯೆಯಲ್ಲಿ ಉದ್ಯೋಗಕೋಶಗಳ ಪಾತ್ರ ಇವೇ  ಮೊದಲಾದ  ವಿಷಯಗಳ  ಕುರಿತ  ಹಲವು  ಕಾರ್ಯಾಗಾರಗಳನ್ನು  ರಾಜ್ಯದ ವಿವಿಧ  ಭಾಗಗಳಲ್ಲಿರುವ ಕಾಲೇಜುಗಳ ಪ್ರಾಂಶುಪಾಲರಿಗೆ, ಉದ್ಯೋಗ ಕೋಶಗಳ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಂಚಾಲಕರಿಗೆ ಹಾಗೂ ಬೋಧಕವರ್ಗದವರಿಗಾಗಿ ಸಂಘಟಿಸಲಾಗುತ್ತಿದೆ.

 

ಸಂದರ್ಶನವನ್ನು ಎದುರಿಸಲು ಅಗತ್ಯವಾದ ಸಲಹೆಗಳು, ರೆಸ್ಯೂಮೆ ರಚನೆ, ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ, ಕಾರ್ಪೊರೇಟ್ ವಲಯದಲ್ಲಿನ ಉದ್ಯೋಗಗಳು, ಸ್ವ-ಉದ್ಯೋಗ ಇವೇ ಮೊದಲಾದ ವಿಷಯಗಳ ಕುರಿತು ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ  ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ   IAS, IPS, IRS,  KAS ಇವೇ ಮೊದಲಾದ ನಾಗರಿಕ ಸೇವಾ ಪರೀಕ್ಷೆಗಳು, ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳು ಮುಂತಾದ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯ ಜೊತೆಗೆ ತರಬೇತಿಯನ್ನೂ ನೀಡಲಾಗುತ್ತಿದೆ.

 

Click Here: Placement Cell Blog


 

ಕಾಲೇಜು ವಿದ್ಯಾರ್ಥಿ ಉದ್ಯೋಗ ಕೋಶಗಳ ವಿವರ

ಉದ್ಯೋಗ ಕೋಶ ವಿವರ 2016-17 2017-18 2018-19
ನಡೆಸಲಾಗಿರುವ ಉದ್ಯೋಗ ಮೇಳಗಳ ಸಂಖ್ಯೆ 153 163 134
ಪಾಲ್ಗೊಂಡ ವಿದ್ಯಾರ್ಥಿಗಳ ಸಂಖ್ಯೆ 25,152 25,932 18,832
ಉದ್ಯೋಗಕ್ಕೆ ಆಯ್ಕೆಗೊಂಡ/ Shortlist ಆದ ವಿದ್ಯಾರ್ಥಿಗಳ ಸಂಖ್ಯೆ 8,058 7,033 6,833

ಇತ್ತೀಚಿನ ನವೀಕರಣ​ : 31-03-2020 12:27 PM ಅನುಮೋದಕರು: DCE



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080