ಅಭಿಪ್ರಾಯ / ಸಲಹೆಗಳು

ಮೈತ್ರಿ ಸಹಾಯವಾಣಿ

ಮೈತ್ರಿ ಸಹಾಯವಾಣಿ1800-425-6178 & 8095556178 (ವಾಟ್ಸಾಪ್) 

ಇ-ಮೆಲ್: dce.maithri@gmail.com

 


ವಿದ್ಯಾರ್ಥಿಗಳನ್ನು ಕಾಡುವ ಸಮಸ್ಯೆಗಳು ಅವರ ಶೈಕ್ಷಣಿಕ ಯಶಸ್ಸಿಗೆ ಅಡೆತಡೆ ಒಡ್ಡುತ್ತವೆ. ಅತೃಪ್ತಿಕರ ಬೋಧನೆ, ಗ್ರಹಣ ಸಾಮರ್ಥ್ಯದ ಕೊರತೆ, ಕಾಲೇಜುಗಳಲ್ಲಿ ಸೌಲಭ್ಯಗಳ ಅಭಾವದಿಂದ ಮೊದಲುಗೊಂಡು ಸಂಪನ್ಮೂಲಗಳ ನ್ಯೂನತೆ, ದುರಭ್ಯಾಸಗಳು, ಮದ್ಯ/ಮಾದಕವಸ್ತುಗಳ ವ್ಯಸನ, ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗಗಳ ಕುರಿತು ಮಾಹಿತಿಯ ಅಭಾವ, ಅಸಫಲ ಸಂಬಂಧಗಳು, ಏಕಾಂಗಿತನ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ,ಇವೇ ಮೊದಲಾದ ಭಾವನಾತ್ಮಕ ಏರುಪೇರುಗಳವರೆಗೆ ವಿದ್ಯಾರ್ಥಿಗಳು ಹಲವು ಮೂಲಗಳಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಸ್ತರಗಳಲ್ಲಿ ವ್ಯಾಸಂಗ ಮಾಡುವ ಹಲವು ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟವುಳ್ಳ ಕುಟುಂಬಗಳಿಂದ ಬರುತ್ತಾರೆ. ಇವರಲ್ಲಿ ಅನೇಕರು ಕುಟುಂಬದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಮೊದಲ ಪೀಳಿಗೆಗೆ ಸೇರಿದವರಾಗಿರುತ್ತಾರೆ. ಇವರಲ್ಲಿ ಹಲವರು ತಮ್ಮ ಸುತ್ತಮುತ್ತಲಿರುವ ಹಿರಿಯರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ.  ಸಂಬಂಧಪಟ್ಟ  ಅಧಿಕಾರಿಗಳ  ಮುಂದೆ  ವಿದ್ಯಾರ್ಥಿಗಳು  ತಮ್ಮ  ಅಳಲುಗಳನ್ನು ತೋಡಿಕೊಂಡರೂ ಪ್ರಯೋಜನವಾಗದೆ ಇರುವ ಪ್ರಸಂಗಗಳೂ ಅಪರೂಪವೇನಲ್ಲ. ಹೀಗೆ ಸಮಸ್ಯೆಗಳಸುಳಿಗಳಲ್ಲಿ  ಸಿಲುಕಿರುವ  ವಿದ್ಯಾರ್ಥಿಗಳು  ಆತ್ಮವಿಶ್ವಾಸ ಹೀನರಾಗಿ,  ಖಿನ್ನರಾಗಿ,  ಅಸಹಾಯಕತೆಯಿಂದ  ಆವೃತರಾಗಿ,  ತಮ್ಮ ಅಂತಃಸತ್ವಕ್ಕೆ ಸರಿದೂಗುವಂತೆ ಅಧ್ಯಯನದಲ್ಲಿ ತೊಡಗಲು ಅಸಮರ್ಥರಾಗುತ್ತಾರೆ.


ಈ  ಸಮಸ್ಯೆಯನ್ನು    ಪರಿಹರಿಸುವ  ನಿಟ್ಟಿನಲ್ಲಿ   ಇಲಾಖೆ   ಅರ್ಥಪೂರ್ಣವಾದ   ನಿಲುವನ್ನು   ತಳೆದು,   ಸರ್ಕಾರಿ   ಪ್ರಥಮ  ದರ್ಜೆ  ಕಾಲೇಜುಗಳ  ವಿದ್ಯಾರ್ಥಿಗಳಿಗಾಗಿ ಮೈತ್ರಿ ಎಂಬ ಹೆಸರಿನ 24*7 ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಈ   ಸಹಾಯವಾಣಿಯ   ಶುಲ್ಕರಹಿತ  ಸಂಖ್ಯೆ   1800-425-6178.   ಕೆಲಸದ ದಿನಗಳಂದು,   ಕಛೇರಿ   ವೇಳೆಯಲ್ಲಿ   ಆಪ್ತಸಲಹೆಯಲ್ಲಿ  ತರಬೇತಿ  ಪಡೆದ  ಇಲಾಖೆಯ ಸಿಬ್ಬಂದಿ ಕರೆಗಳನ್ನು ಸ್ವೀಕರಿಸುತ್ತಾರೆ. ಈ ಕುರಿತು ಸಂಬಂಧಪಟ್ಟಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಷಯ ಸಂವಹನ ಮಾಡಲಾಗುತ್ತದೆ.


ಮೈತ್ರಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಮತ್ತು ಸೂಕ್ತ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಕಾರ್ಯ ನಿರ್ವಹಿಸುತ್ತದೆ.

ಇತ್ತೀಚಿನ ನವೀಕರಣ​ : 31-03-2020 11:51 AM ಅನುಮೋದಕರು: DCE



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080