ಅಭಿಪ್ರಾಯ / ಸಲಹೆಗಳು

ಆಯುಕ್ತಾಲಯದ ವಿಭಾಗಗಳು

ಪ್ರಮುಖ ವಿಭಾಗಗಳು

ನೇಮಕಾತಿ ವಿಭಾಗ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸುವುದು,ಅನುಕಂಪದಆಧಾರದಲ್ಲಿ ಬೋಧಕೇತರ ಸಿಬ್ಬಂದಿಯನ್ನು ನೇಮಿಸುವುದು,ಅತಿಥಿ ಉಪನ್ಯಾಸಕರ ನೇಮಕಾತಿ ಮತ್ತು ಕೇಡರ್ ನಿಯಮಗಳ ಕಡತಗಳ ನಿರ್ವಹಣೆ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಎಲ್ಲಾ ಕೇಡರ್ ಹುದ್ದೆಗಳ ನೇಮಕಾತಿ.
ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳು,ಅನುದಾನಿತ ಬಿಇಡಿ ಕಾಲೇಜು, ಅನುದಾನಿತ ಕಾನೂನು ಕಾಲೇಜುಗಳು ಮತ್ತು 1987 ರಿಂದ 1995 ರವರೆಗೆ ಎಸ್ಸಿ/ಎಸ್ಟಿ ಆಡಳಿತ ಮಂಡಳಿ ಅಡಿಯಲ್ಲಿ ನಡೆಯುವ ಕಾಲೇಜುಗಳು ಮತ್ತು ಬಿಪಿಇಡಿ ಕಾಲೇಜುಗಳಿಗೆ ಅನುದಾನ ಸಹಾಯ ಸೌಲಭ್ಯ ಒದಗಿಸಲು ಕ್ರಮಗಳನ್ನು ಕೈಗೊಳ್ಳುವುದು, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿರುವ ಖಾಸಗಿಅನುದಾನಿತ ಕಾಲೇಜುಗಳಿಗೆ 371(ಜೆ) ನಿಯಮಗಳ ಪ್ರಕಾರ ಸೌಲಭ್ಯಗಳನ್ನು ಜಾರಿಗೊಳಿಸುವುದು ಇವೇ ಮೊದಲಾದ ಕಾರ್ಯಗಳನ್ನು ನೇಮಕಾತಿ ವಿಭಾಗವು ನಿರ್ವಹಿಸುತ್ತದೆ.

 

ಸೇವಾ ವಿಭಾಗ

ಈ ವಿಭಾಗವು ಹಿಂದಿನ ಸೇವೆಗಳ ರಕ್ಷಣೆ, ಅರ್ಹತಾ ಸೇವೆಗಳ ಪರಿಗಣನೆ, ಪರೀಕ್ಷಾರ್ಥ ಸೇವಾ ಅವಧಿಯ ಘೋಷಣೆ , ಪಿ ಹೆಚ್ ಡಿ ,ಎಂ ಪಿಲ್ ಪದವಿಗಳಿಗೆ ವೇತನ ಬಡ್ತಿ ಮಂಜೂರಾತಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಿಬ್ಬಂದಿಗೆ ಎಲ್ ಟಿ ಸಿ/ಹೆಚ್ ಟಿ ಸಿ ಒದಿಗಿಸಿವುದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಿಬ್ಬಂದಿಗೆ ಯುಜಿಸಿ ವೇತನ ನಿಗದಿಪಡಿಸುವುದು, ಮುಂಬಡ್ತಿ ಪಡೆದ ಸಿಬ್ಬಂದಿಗೆ ವೇತನ ನಿಗದಿ ಪಡೆಸುವುದು  ವಿದೇಶಿ ಪ್ರವಾಸ, ಭೂಮಿ/ಮನೆ/ವಾಹನ ಖರೀದಿಗೆ ನಿರಪೇಕ್ಷಣಾ ಪ್ರಮಾಣ ಪತ್ರ(ಎನ್ ಒಸಿ) ನೀಡುವುದು,ಬೋಧಕೇತರ ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ಬಡ್ತಿಗಳಾದಟಿಬಿಎ/ಟಿಬಿಪಿಗಳನ್ನು ಮಂಜೂರು ಮಾಡುವುದು,ಸಣ್ಣ ಕುಟಂಬ ಭತ್ಯೆ,ದಿವ್ಯಾಂಗಭತ್ಯೆ, ಪ್ರಭಾರ ಭತ್ಯೆ ಮತ್ತು ಇತರೆ ಭತ್ಯೆಗಳನ್ನು ಮಂಜೂರು ಮಾಡುವುದು ಇವೇ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

 

ವರ್ಗಾವಣೆ/ನಿಯೋಜನೆ ವಿಭಾಗ

ಈ ವಿಭಾಗದ ಪ್ರಮುಖ ಕಾರ್ಯವೆಂದರೆ ಕಾಲೇಜು ಶಿಕ್ಷಣ ಇಲಾಖೆ ವರ್ಗಾವಣೆ ಕಾಯಿದೆ 2012 ರ ನಿಬಂಧನೆಗಳ ಪ್ರಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಕೌನ್ಸಿಲಿಂಗ್ ಮುಖಾಂತರ ವರ್ಗಾವಣೆ ಮಾಡುವುದು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕಡಿಮೆ ಕಾರ್ಯಭಾರ ಹೊಂದಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಗತ್ಯ  ಕಾರ್ಯಭಾರ ಹೊಂದಿರುವ ಕಾಲೇಜುಗಳಿಗೆ ನಿಯೋಜನೆಗೊಳಿಸುವುದು.

 

ಬಡ್ತಿ ಸ್ಥಾನೀಕರಣ ವಿಭಾಗ

 

ಈ ವಿಭಾಗವು ಬೋಧಕ ಸಿಬ್ಬಂಧಿ ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರು/ಗ್ರೇಡ್-1/ಗ್ರೇಡ್- 2 ಪ್ರಾಂಶುಪಾಲರುಗಳು ಮತ್ತು ಮುಖ್ಯ ಕಛೇರಿಯ ಬೋಧಕೇತರ ಸಿಬ್ಬಂದಿ/ಪ್ರಾದೇಶಿಕ ಕಛೇರಿಗಳ ಬೋಧಕೇತರ ಸಿಬ್ಬಂದಿ/ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕೇತರ ಸಿಬ್ಬಂದಿಗೆ ಸಂಬಂಧಿಸಿದ ಜೇಷ್ಟತಾಪಟ್ಟಿಯನ್ನು ಸಿದ್ದಪಡಿಸುವುದು. ಈ ವಿಭಾಗವು ವೃತ್ತಿ ಮುಂಗಡ ಯೋಜನೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಸಿಬ್ಬಂದಿಗೆ ಉನ್ನತ ಎಜಿಪಿ ಮ0ಜೂರುಗೊಳಿಸುವುದು ಗ್ರೇಡ್ - 2 ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡುವುದು ಮತ್ತು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಬೋಧಕೇತರ ಸಿಬ್ಬಂದಿಗೆ ಬಡ್ತಿ ನೀಡುವುದು ಈ ಕಾರ್ಯಗಳನ್ನು ಕೂಡಾ ನಿರ್ವಹಿಸುತ್ತದೆ.

 

ತನಿಖಾ ವಿಭಾಗ

 

ಈ ವಿಭಾಗವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಬಂದ ದೂರುಗಳನ್ನು ಸ್ವೀಕರಿಸಿ ಇಲಾಖಾ   ವಿಚಾರಣೆಯನ್ನು ನಡೆಸುವುದು, ಶಿಸ್ತುಕ್ರಮ ಕೈಗೊಳ್ಳುವುದು,ದೂರುಗಳಿಗೆ ಸಂಬಂಧಿಸಿದಂತೆ ವಿವಿಧ ಆಯೋಗಗಳಿಗೆ ವರದಿಗಳನ್ನು ಸಲ್ಲಿಸುವುದು, ಸರ್ಕಾರಿ ಕಾಲೇಜುಗಳ ಆಡಳತಾತ್ಮಕ ತನಿಖೆ ಕೈಗೊಳ್ಳುವುದು,ಲೋಕಾಯುಕ್ತ ಮತ್ತು ಭ್ರಷ್ಟಾಚಾರ ವಿರೋಧಿ ಘಟಕಗಳಿಂದ ಬಂದ ದೂರುಗಳ ವಿಚಾರಣೆ ನಡೆಸಿ ವರದಿಗಳನ್ನು ಸಲ್ಲಿಸುವುದು, ಮಾಹಿತಿ ಹಕ್ಕಿನಡಿ ಬಂದ ಮನವಿಗಳ ವಿಚಾರಣೆ ಮತ್ತು ಪರೀಕ್ಷೆ ನಡೆಸಲು ವಿಚಾರಣಾ ಸಮಿತಿಯನ್ನು ನೇಮಿಸುವುದು ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

 

 

ಕಾನೂನು ವಿಭಾಗ

 

ಕಾನೂನು ವಿಭಾಗವು, ಇಲಾಖೆಯ ವಿರುದ್ಧ ದಾಖಲಿಸಲಾಗಿರುವ ನ್ಯಾಯಾಲಯದ ಪ್ರಕರಣಗಳಲ್ಲಿ ಇಲಾಖೆಯನ್ನು ಪ್ರತಿನಿಧಿಸುತ್ತದೆ.  ಸರ್ಕಾರ/ಇಲಾಖೆಯ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದ ಬೆಂಗಳೂರು,ಧಾರವಾಡ, ಕಲಬುರ್ಗಿ ಪೀಠಗಳಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ, ಕೆಎಟಿ ಮತ್ತಿತರ ನ್ಯಾಯಾಲಯಗಳಲ್ಲಿ ಸರ್ಕಾರ/ಇಲಾಖೆಯ ವಿರುದ್ಧ ದಾಖಲಿಸಲಾಗಿರುವ ರಿಟ್ ಅರ್ಜಿಗಳ/ರಿಟ್‌ ಅಪೀಲುಗಳ ಮೇಲ್ವಿಚಾರಣೆ, ನ್ಯಾಯಾಂಗ ನಿಂದನಾ ಪ್ರಕರಣಗಳ ಮೇಲ್ವಿಚಾರಣೆ, ಪ್ರಧಾನ ಕಾರ್ಯದರ್ಶಿ/ಆಯುಕ್ತರ ನ್ಯಾಯಾಲಯದಲ್ಲಿ ಕರ್ನಾಟಕ ಶೈಕ್ಷಣಿಕ ಕಾಯಿದೆಯಡಿಯಲ್ಲಿ ದಾಖಲಿಸಲಾಗಿರುವ ಅರ್ಜಿಗಳ ಮೇಲ್ವಿಚಾರಣೆ, ಇಲಾಖೆಯ ಎಲ್ಲ ವಿಭಾಗಗಳಿಂದ ನ್ಯಾಯಾಲಯದ ಮೊಕದ್ದಮೆಗಳಿಗೆ ಸಂಬಂಧಿಸಿದ  ಕಂಡಿಕೆವಾರು ಷರಾಗಳನ್ನು ಪಡೆದು ಅವುಗಳನ್ನು ಸರ್ಕಾರಿ ನ್ಯಾಯವಾದಿಗಳಿಗೆ ಸಲ್ಲಿಸುವುದು, ನ್ಯಾಯಲಯದ ತೀರ್ಪುಗಳ ಅನುಷ್ಠಾನದ ಬಗ್ಗೆ ವಿಭಾಗಗಳಿಗೆ ಸಲಹೆ ಸೂಚನೆಗಳನ್ನು ನೀಡುವುದು, ಇಲಾಖೆಗೆ ಸಂಬಂಧಿಸಿದ  ಪ್ರಕರಣಗಳ ಕುರಿತು ಸರ್ಕಾರಿ ನ್ಯಾಯವಾದಿಗಳಿಗೆ ಹೆಚ್ಚುವರಿ ಮಾಹಿತಿ ಮತ್ತು ದಾಖಲೆಗಳನ್ನೊದಗಿಸುವುದು ಇವೇ ಮೊದಲಾದ ಕಾರ್ಯಗಳನ್ನು  ನಿರ್ವಹಿಸುತ್ತದೆ.

ಶೈಕ್ಷಣಿಕ ವಿಭಾಗ

 

ಈ ವಿಭಾಗವು ಶೈಕ್ಷಣಿಕ ಜವಾಬ್ದಾರಿಗಳಾದ ಹೊಸ ಕೋರ್ಸುಗಳಿಗೆ ಅನುಮತಿ ನೀಡುವುದು, ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ವಿವಿಧ ಸಂಯೋಜನೆಗಳಿಗೆ ಅನುಮತಿ ನೀಡುವುದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿಜ್ಞಾನ ಕೋರ್ಸುಗಳ ಉತ್ತೇಜನಕ್ಕೆ ಧನಸಹಾಯ ನೀಡುವುದು ಅಂದರೆ ಪ್ರಯೋಗಾಲಯ ಉಪಕರಣಗಳು, ರಾಸಾಯನಿಕಗಳು ಪಠ್ಯಪುಸ್ತಕಗಳು, ಅಧ್ಯಾಯನ ಗ್ರಂಥಗಳು ಪೀಠೋಪಕರಣಗಳನ್ನು ಒದಗಿಸುವುದು ಈ ಕಾರ್ಯಗಳನ್ನು ನಿರ್ವಹಿಸುತ್ತದೆ.

 

ಈ ಶೈಕ್ಷಣಿಕ ವಿಭಾಗ ನ್ಯಾಕ್ ಅಂಗ ಸಂಸ್ಥೆಯನ್ನು ಒಳಗೊಂಡಿದ್ದು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ನ್ಯಾಕ್ ಮೌಲ್ಯೀಕರಣ ಮತ್ತು ಮರು ಮೌಲ್ಯೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ನ್ಯಾಕ್ ಅಂಗ ಸಂಸ್ಥೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ತಾಂತ್ರಿಕ ಮತ್ತು ಹಣಸಹಾಯವನ್ನು ಒದಗಿಸುತ್ತದೆ. ಈವರೆಗೆ 222 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮೌಲ್ಯೀಕರಣ ಮತ್ತು ಮರು ಮೌಲ್ಯೀಕರಣ  ಮಾಡಲಾಗಿದೆ.


ಕರ್ನಾಟಕ ರಾಜ್ಯದ  ಹೆಚ್ಚಿನ ಸಂಖ್ಯೆಯ ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್‌ ಮಾನ್ಯತೆ ಪಡೆಯುವಲ್ಲಿ ಯಶಸ್ಸು ಪಡೆದಿದ್ದು,   ನ್ಯಾಕ್‌ ಮಾನ್ಯತೆ ಹೊಂದಿರುವ ಅತಿ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಮತ್ತು ದಕ್ಷಿಣ ಭಾರತದಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದೆ.

 

ಮಾಹಿತಿ ತಂತ್ರಾಜ್ಞಾನ ವಿಭಾಗ

 

ಈ ವಿಭಾಗವು ಇಲಾಖೆಯ ಎಲ್ಲಾ ಅವಶ್ಯಕತೆಗಳನ್ನು ಇ-ಸಂಗ್ರಹಣೆ ಮೂಲಕ ನಿರ್ವಹಿಸುತ್ತದೆ.ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವೆಬ್ ಸೈಟ್ ಪೋರ್ಟಲ್ ಗಳ ನಿರ್ವಹಣೆಗೆ ಬೇಕಾದ ತಾಂತ್ರಿಕ ಸಹಾಯವನ್ನು ಒದಗಿಸುತ್ತದೆ. ಐಟಿ/ಐಟಿಸಿ ಉಪಯೋಗಕ್ಕೆ ಬೇಕಾದ ಕ್ರಿಯಾಯೋಜನೆಯನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು ಹೆಚ್ ಆರ್ ಎಂ ಎಸ್ ತರಬೇತಿ ಮೂಲಕ ಕಾಲೇಜು ಸಿಬ್ಬಂಧಿಗೆ ಸಾಮರ್ಥ್ಯ ನಿರ್ಮಾಣ ಮಾಡುವುದು ಇ ಎಂ ಐ ಎಸ್ ನಿರ್ವಹಣೆ , 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 321 ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಬೊಧಕ/ಬೊಧಕೇತರ ಸಿಬ್ಬಂದಿಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿಸುವುದು ಈ ಕಾರ್ಯಗಳನ್ನು ನಿರ್ವಹಿಸುತ್ತದೆ.

 

ಯೋಜನಾ ವಿಭಾಗ

 

ಈ ವಿಭಾಗದ ಬಹುವಿಶಾಲ ಕಾರ್ಯವ್ಯಾಪ್ತಿಯು ಹಿಂದಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಸ್ತಾವನೆಯನ್ನು ತಯಾರಿಸುವುದು. ವಾರ್ಷಿಕ ಆಯ-ವ್ಯಯ ಅಂದಾಜು ತಯಾರಿಸುವುದು ಡಿ ಎಸ್ ಎಸ್ ಮೂಲಕ ಅನುದಾನ ವೆಚ್ಚ –ಮಾಹಿತಿಯನ್ನು ತುಂಬುವುದು, ಲಿಂಗಾಧಾರಿತ ಆಯ-ವ್ಯಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಯಾರಿಸುವುದು, ಹಣಕಾಸು ವಿಶ್ಲೇಷಣೆ, ಹೊಸ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುವುದು,  ಹೊಸ ಕಾಲೇಜು ಸ್ಥಾಪನೆಗೆ ಭೂಮಿಯನ್ನು ಕೊಡುಗೆ ನೀಡಿದ ಅಥವಾ ಕಾಲೇಜು ಕಟ್ಟಡ ನಿರ್ಮಾಣ ವೆಚ್ಚದಲ್ಲಿ 1/3 ಭಾಗ ವೆಚ್ಚ ಭರಿಸಿದ ಅಥವಾ ಇತರೆ ಕೊಡುಗೆ ನೀಡಿದವರ ಹೆಸರನ್ನು ಕಾಲೇಜುಗಳಿಗೆ ಆಯ್ಕೆ ಮಾಡುವುದು, ಕೆ ಡಿ ಪಿ ಸಭೆಗಳಿಗೆ ಮಾಹಿತಿಯನ್ನು ಸಲ್ಲಿಸುವುದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮರುನಾಮಕರಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

 

ಆಯ-ವ್ಯಯ ವಿಭಾಗ

 

ಈ ವಿಭಾಗವು ಖಾಸಗಿ ಅನುದಾನಿತ ಪದವಿ ಕಾಲೇಜುಗಳ,ಬಿಇಡಿ ಕಾಲೇಜುಗಳ,ಚಿತ್ರಕಲಾ ಕಾಲೇಜುಗಳ ಮತ್ತು ಕಾನೂನು ಕಾಲೇಜುಗಳ ಸಿಬ್ಬಂದಿಗೆ ವೇತನದ ಅನುದಾನಗಳನ್ನು ಮಂಜೂರುಮಾಡುವುದು,ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನವನ್ನು ಮಂಜೂರುಮಾಡುವುದು. ಕೇಂದ್ರ ಕಛೇರಿ ಮತ್ತು ಆರು ಪ್ರಾದೇಶಿಕ ಕಛೇರಿಗಳಿಗೆ ಅಗತ್ಯ ವೆಚ್ಚದ ಅನುದಾನ ಮಂಜೂರುಮಾಡುವುದು,ಅನುದಾನಗಳ ಪುನರ್ವಿನಿಯೋಗ ಮನವಿಗಳನ್ನ ಸರ್ಕಾರಕ್ಕೆ ಸಲ್ಲಿಸುವುದು,ಅನುದಾನ ಕೊರತೆ ಸಂಬಂಧ ಹೆಚ್ಚುವರಿ ಅನುದಾನ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವುದು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಮಾಸಿಕ ವೆಚ್ಚವನ್ನು ಸಮನ್ವಯಗೊಳಿಸುವುದು ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತದೆ.

ಇತ್ತೀಚಿನ ನವೀಕರಣ​ : 31-03-2020 04:52 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080