ಅಭಿಪ್ರಾಯ / ಸಲಹೆಗಳು

ಇಲಾಖೆಯತ್ತ ಮಿಂಚುನೋಟ

 

ಕಾಲೇಜು ಶಿಕ್ಷಣ ಇಲಾಖೆಗೆ ಸುಸ್ವಾಗತ

 

1960 ನೇ ಸಾಲಿನಲ್ಲಿ ಸ್ಥಾಪನೆಯಾದ  ಕಾಲೇಜು ಶಿಕ್ಷಣ ಇಲಾಖೆಯು ಸಮಾಜದ ಎಲ್ಲ  ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ  ಉನ್ನತ ಶಿಕ್ಷಣವನ್ನು ತಲುಪಿಸುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರಥಮ ಆದ್ಯತೆಯಾಗಿ ಹೊಂದಿರುವ ಕಾಲೇಜು  ಶಿಕ್ಷಣ  ಇಲಾಖೆ, ವಿಶೇಷವಾಗಿ ಅತಿ ಹಿಂದುಳಿದ ವರ್ಗ,  ಮಹಿಳೆಯರು  ಮತ್ತು ಗ್ರಾಮೀಣ ಭಾಗದ ಯುವಜನತೆಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಲಭ್ಯವಾಗುವಂತೆ ಕ್ರಮ ವಹಿಸುವಲ್ಲಿ ಕಾರ್ಯಪ್ರವೃತ್ತವಾಗಿರುತ್ತದೆ.

 

ಪ್ರಸ್ತುತ ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದಲ್ಲಿರುವ  355 ಸಹಶಿಕ್ಷಣ ಕಾಲೇಜುಗಳು, 53 ಮಹಿಳಾ ಕಾಲೇಜುಗಳು,  06 ಕಾನೂನು ಕಾಲೇಜುಗಳು, 14 ವಸತಿಯುಕ್ತ ಕಾಲೇಜುಗಳು, 02 ಮಾದರಿ ಕಾಲೇಜುಗಳನ್ನು ಮತ್ತು 02 ಚಿತ್ರಕಲಾ ಕಾಲೇಜುಗಳನ್ನು ಒಳಗೊಂಡಂತೆ ಒಟ್ಟು  430  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 321 ಅನುದಾನಿತ ಕಾಲೇಜುಗಳ ಆಡಳಿತ, ಅನುದಾನ ಮಂಜೂರಾತಿ, ಯೋಜನಾ ಕಾರ್ಯಗಳನ್ನು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಕಲ್ಬುರ್ಗಿಗಳಲ್ಲಿರುವ 06 ಪ್ರಾದೇಶಿಕ ಕಛೇರಿಗಳ ಸಹಾಯದಿಂದ ನಿರ್ವಹಿಸುತ್ತದೆ.

 

ಸ್ವಾತಂತ್ರ್ಯೋತ್ತರ ಕಾಲದ ಖ್ಯಾತ ಶಿಕ್ಷಣ ತಜ್ಞರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶ್ರೀ ಲಕ್ಷ್ಮೀನಾರಾಯಣ ಮೊದಲಿಯಾರ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಗಳ ಶಿಫಾರಸ್ಸಿನೊಂದಿಗೆ ಕಾಲೇಜು ಶಿಕ್ಷಣ ಇಲಾಖೆ   ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಹ. ಕೇವಲ 44 ಕಾಲೇಜುಗಳೊಂದಿಗೆ ಪ್ರಾರಂಭಗೊಂಡ ಇಲಾಖೆಯು ಪ್ರಸ್ತುತ ಬೃಹತ್ತಾಗಿ ವಿಸ್ತರಿಸಿರುವುದೂ ಪ್ರಶಂಸಾರ್ಹವಾಗಿದೆ.

 

ರಾಜ್ಯದಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಇಲಾಖೆಯು ಬಹಳ ಶ್ರಮಿಸಿದೆ.

 

ಇಲಾಖೆಯ ಮುಖ್ಯವಾದ ಚಟುವಟಿಕೆಗಳೆಂದರೆ.


• ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ವಹಣೆ.
• ಆವಶ್ಯಕತೆಯನ್ನು ಆಧರಿಸಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸುವುದು.
• ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ವಿತರಿಸುವುದು.
• ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸರ್ಕಾರಿ ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
• ಪದವಿ ಕಾಲೇಜುಗಳಿಗೆ ಹೊಸ ಕೋರ್ಸ್ ಮತ್ತು ಹೊಸ ವಿಷಯಗಳ ಪರಿಚಯಿಸಲು ಅನುಮತಿ ನೀಡುವುದು
• ಶೈಕ್ಷಣಿಕ ಮತ್ತು ಭೌತಿಕ ಸಂಪನ್ಮೂಲಗಳನ್ನು ಸೃಷ್ಟಿಸಲು ರೂಸಾ ಯೋಜನೆಯ ಅನುಷ್ಠಾನ
• ರಾಜ್ಯದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವುದು.
• ನ್ಯಾಕ್‌ನಿಂದ ಮಾನ್ಯತೆ ಪಡೆಯಲು ಪದವಿ ಕಾಲೇಜುಗಳನ್ನು ಸಿದ್ಧಗೊಳಿಸುವುದು.
• ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
• ಪದವಿ ಕಾಲೇಜುಗಳಲ್ಲಿ ಬೋಧನೆ ಮತ್ತು ಆಡಳಿತ ಪ್ರಕ್ರಿಯೆಯನ್ನು ಗಣಕೀಕೃತಗೊಳಿಸುವುದು.
• ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವಾವಿಷಯಗಳ ನಿರ್ವಹಣೆ.
• ಮೈತ್ರಿ ವಿದ್ಯಾರ್ಥಿ ಸಹಾಯವಾಣಿಯ ನಿರ್ವಹಣೆ.
• 30 ಜಿಲ್ಲಾಕೇಂದ್ರಗಳಲ್ಲಿ ಸ್ಥಾಪನೆಗೊಂಡಿರುವ ‘ಯುವಸಬಲೀಕರಣ ಕೇಂದ್ರಗಳ’ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದು
• ‘ವಿಜಯೀ ಭವ’ ಯೂಟ್ಯೂಬ್ ಚಾನೆಲ್‍ಗಾಗಿ ಕಾರ್ಯಕ್ರಮಗಳ ನಿರ್ಮಾಣ ಮತ್ತು ಅಪ್‍ಲೋಡ್
• ಮಹಿಳಾ ಕಾಲೇಜು ಮತ್ತು ವಸತಿಕಾಲೇಜುಗಳ ಸ್ಥಾಪನೆ.
• ವಿದ್ಯಾರ್ಥಿ ವಸತಿ ನಿಲಯಗಳ ನಿರ್ವಹಣೆ.

 

ಇತ್ತೀಚಿನ ನವೀಕರಣ​ : 31-03-2020 04:51 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080